Tuesday, November 23, 2010

1.
ಈ ಕಥೆ ನಿಜವಾಗ್ಲೂ ನಡೆದಿದೆನಾ? ಅಥವಾ ನೀವಿದನ್ನ ಅನುಭವಿಸಿದರಾ? ಅಥವಾ ನಿಮ್ಗೆ ಬೇಕಾಗಿರೋರು ಅನುಭವಿಸಿದಾರಾ? ಗೊತ್ತಿಲ್ಲಾ..
ಆಷ್ಟಕ್ಕೂ ಈ ಕಥೆಗೆ ನಾನು ನೀಲಿಮನೆ ಅಂತ ಯಾಕಿಡಬೇಕು ಅಂತ ನಂಗೆ ಕನ್ಫ್ಯೂಷನ್. ಆದ್ರೆ "ನೀಲಿಮನೆ" ಕೆಳೋಕ್ಕೆ ಎಸ್ಟು ಹಿತ ಅನ್ಸುತ್ತೆ ಅಲ್ವಾ? ಹೌದು, ವಿಚಿತ್ರ ಆದ್ರೂ ಅದ್ರಲ್ಲಿ ನಾನು ನನ್ನ ಅನಿಸಿಕೆ ಹಂಚ್ಕೋಬೇಕು ಅನ್ನಿಸ್ತು. ಕಥೆಯ ನಾಯಕ ಪ್ರವೀಣ ನಾಯಕಿ ನಾಗಲಕ್ಷ್ಮಿ. ಕಥೆಯಲ್ಲಿ ಅವಳನ್ನ ಒಳ್ಳೆಯದಾಗಿ ತೋರ್ಸಿದ್ರೂ ಕೊನೇ ಕೊನೆಗೆ ಅವಳಾಗೇ ಕೆಟ್ಟವಳಾಗಿಬಿಟ್ಲೆನೋ ಅನ್ಸುತ್ತೆ. ಅದು ಅನಿವಾರ್ಯವಾಗಿತ್ತೇನೋ ಅನ್ಸುತ್ತೆ.

ಪ್ರವೀಣನ ಸ್ವಭಾವನೆ ಹಾಗೆ, ಮುಂಗೋಪಿಯಾದ್ರೂ ಒಳ್ಳೇ ಮನಸು. "ಬ್ಲಡೀ ಬಿಚ್..!!" ಅಂದುಕೊಂಡೆ ಅವತ್ತು ಎದ್ದು ಎಂದಿನ ಹಾಗೆ ಕಾರಾಗ್ರ ವಸತೆ ಲಕ್ಷೀ ಅಂತ ತನ್ನ ಕೈ ನೋಡ್ಕೊಂಡು ಗಣೇಶನ ಫೋಟೊಗೆ ಕೈ ಮುಗಿದು ಹೊರಗೆ ಬಂದ್ರೆ ಅವ್ನಿಗೆ ಮತ್ತೆ ಮತ್ತೆ ಅದೇ ಕನಸು ಮನಸಲ್ಲಿ ಮೂಡ್ತು. ಅರೆ, ಇಷ್ಟು ದಿನ ಇರದದ್ದು ಇವತ್ತು ಯಾಕೆ ಹಿಂಗಾಯ್ತಪ್ಪ ಅಂಕೊಂಡವ್ನೇ ಸ್ನಾನಕ್ಕೆ ಹೋದ. "ಅವ್ನು ಯಾವಾಗ್ಲೂ ಅಷ್ಟೇ, ಸ್ನಾನಕ್ಕೆ ಹೋದ್ರೆ ಅರ್ಧ ಘಂಟೆಯಾದ್ರೂ ಬರಲ್ಲ ಅಂದ್ಕೊಂಡೆ" ಅವನ ತಾಯಿ ಬಚ್ಚಲು ಮನೆ ಬಾಗಿಲು ಬಡಿಟಾಲೆ. "ಲೊ ಮಗನೆ ಬಾರೋ,ನಿನ್ನ ಫ್ರೆಂಡ್ ರಮೇಶ ಬಂದಿದಾನೆ ಹುಬ್ಬಳ್ಳಿ ಗೆ ಎಗ್ಸ್ಯಾಮ್ ಗೆ ಹೋಗ್‌ಬೇಕು ಆಂದೋವ್ನು ಎಂಟೂ ಕಾಲು ಆಯ್ತು ಬಚ್ಚಲು ಮನೇಲೀ ಇರ್ಬೇಕು ಅಂಕೊನ್ಡಿದೀಯಾ?" ಸ್ನಾನ ಮಾಡ್ತಿದ್ದೋನಿಗೆ ಅದೇ ನೆನಪಾಗದ ಕನಸು, ನೆನಪು ಮಾಡ್ಕೊಂಡಷ್ಟು ಮರೆತೊಗೋ ಕನಸು. ಸ್ನಾನದಿಂದ ಬಂದವ್ನೇ ಸಿಟ್ಟಾಗಿ ನೋಡ್ತಿದ್ದ ರಮೇಶನಿಗೆ ಕಣ್ಣಲ್ಲೇ ಸಮಾಧಾನ ಮಾಡಿ "10 ನಿಮ್ಶದಲ್ಲಿ ರೆಡೀ ಆಗ್ತೀನೋ" ಅಂತ ಹೇಳಿ 20 ನಿಮ್ಶ ದಲ್ಲಿ ತಿಂಡಿ ತೀರ್ಥ ಮುಗಿಸ್ಕೊಂಡು ನಡಿ ಅಂತ ಬ್ಯಾಗ್ ಹಾಕೊಂಡು, "ಅಮ್ಮಾ ಬರ್ತೀನೇ" ಅಂತ ಅವಳ ಉತ್ತರಕ್ಕೂ ಕಾಯದೇ ಹೊರಟ. ಬಸ್ಸಿನಲ್ಲಿ ಕೂತವನಿಗೆ ಅದೇ ಕನಸು ಮಿಂಚಿದ ಹಾಗೆ, ಯಾವುದೋ ಹುಡುಗಿ ಬಂದ ಹಾಗೆ,ತಿಳಿ ನೀಲಿ ಬಣ್ಣದ ಸೀರೆ, ಬಳೆ, ಮತ್ತದೇ ನಗು, ನಿನ್ನನ್ನ ಮಾತಾಡಿಸ್ತೀನಿ, ಮತ್ತೆ ಏನೋ ಅಂದ ಹಾಗೆ, ನೆನಪು ಮಾಡ್ಕೊಂಡಷ್ಟು ಮರೆತುಹೋದ ಹಾಗೆ. ಅಷ್ಟೊತ್ತಿಗೆ ರಮೇಶ ಏನೋ ಓದಿದೆ ಅಂತ ಕೇಳಿದ. ಅವ್ನಿಗೆ ಜೀವನದಲ್ಲಿ MBA ಮಾಡ್ಬೇಕು, ದೊಡ್ಡ ಕಂಪನೀ ಯಲ್ಲಿ ಮ್ಯಾನೇಜರ್ ಆಗ್ಬೇಕು ಅಂತ ದೊಡ್ಡ ಆಸೆ ಇತ್ತು. ಅದರಂತೆ ಅವ್ನು CET ಬರೆಯೋಕೆ ಅಂತಾ ಹಾರ್ಡ್ ಆಗಿ ಸ್ಟಡೀ ಮಾಡದೇ ಇದ್ರೂ ಎಗ್ಸ್ಯಾಮ್ ಬರೆಯೋಕೆ ಹೊರಟು ನಿಂತಿದ್ದ. ಆದ್ರೂ ಅದನ್ನ ರಮೇಶನಿಗೆ ಹೇಳ್‌ಬೇಕು ಅಂತ ಅಂದುಕೊಂಡು ಹೇಳಿದ್ರೆ ಅವ್ನು ಗೊಳ್ಳೆಂದು ನಕ್ಕ. ಏನೋ? ಯಾರನ್ಣಾದ್ರೂ ಲೈಕ್ ಮಾಡ್ತೀದೀಯಾ ಅಂತ ಅವನದೇ ಧಾಟಿಯಲ್ಲಿ ಕೇಳಿದ, ಅದಕ್ಕವನು ತಲೆ ಕೊಡವಿ, ಹೊಗೊಲೊ ನಿಂದು ಯಾವಾಗ್ಲೂ ಬಾರಿ ತಮಾಷೆ ಅಂತ ಸುಮ್ಮನೇ ಕೂತ. ಅವ್ನಿಗೆ ನಿಜವಾಗ್ಲೋ ತಾನು ಕಂಡ ಕನಸು ನಿಜವಾಗುತ್ತೆ ಅಂತ ಅನುಮಾನ ಬರ್ಲಿಲ್ಲ. ಎಲ್ಲರೂ ತಮಗೆ ಎಷ್ಟು ಅಂಕ ಬರಬಹುದು ಅಂತ ವಿಚಾರ ಮಾಡ್ತಾ ಇದ್ರೆ ಇವ್ನು ಯಾವಾಗಲು ಇರೋ ಹಾಗೆ ಸುಮ್ನೇ ಇದ್ದ, ಕೂಲ್ ಕೂಲ್. ಅವ್ನು ಇರೋದೇ ಹಾಗೆ. ಮನೆಗೆ ಬಂದ್ರೆ ಅಮ್ಮ, ಏನೋ ಹೆಗ್ ಬರೆದೆ ಅಂದ್ರೆ, ಏನೋ ಬರ್ದಿದೀನಿ ಅಂತ ಹೇಳಿದ. ಇಲ್ಲೂ ಅಷ್ಟೇ ಅವ್ನಿರೋದೇ ಹಾಗೆ. ಅಮ್ಮ ಮತ್ತು ಅವಳು ಕಲಿಸಿಕೊಡೋ ತುಪ್ಪ,ಮೆಣಸಿನ ಪುಡಿ ಬೆಳ್ಳುಳ್ಳಿ ಹಾಕಿ ಬಿಸಿ ಬಿಸಿ ಅನ್ನ ಬಿಟ್ರೆ ಏನೂ ಬೇಡ. ಅವನ ಅಮ್ಮ ಅಂದ್ರೆ ಅವನ ಪಾಲಿಗೆ ದೊಡ್ಡ ವಂಡರ್ ಮತ್ತು ಪ್ರೀತಿ, ಅದಕ್ಕೆ ಅವ್ನು ಅವಳನ್ನ ಏಕ ವಚನ ದಲ್ಲೇ ಕರಿಯೋದು. ಅಮ್ಮನಿಗೆ ಕನಸಿನ ವಿಷಯ ಹೇಳೋಣವಾ? ಅನ್ನೋವಾಗ....


ಮುಂದುವರೆಯುವುದು...


No comments:

Post a Comment